Students can Download Karnataka SSLC Kannada Previous Year Question Paper June 2018 (1st Language), Karnataka SSLC Kannada Model Question Papers with Answers helps you to revise the complete Karnataka State Board Syllabus and score more marks in your examinations.
Karnataka State Syllabus SSLC Kannada Previous Year Question Paper June 2018 (1st Language)
ಸಮಯ : 3 ಗಂಟೆ
ಅಂಕಗಳು : 100
ವಿಭಾಗ – ‘ಎ’
(ಪಠ್ಯಗಳ ಅಧ್ಯಯನ – ಗದ್ಯ ಪದ್ಯ, ಪೋಷಕ ಅಧ್ಯಯನ)
I. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
ಪ್ರಶ್ನೆ 1.
ಲಂಡನ್ನಿನಲ್ಲಿ ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರೇನು?
ಪ್ರಶ್ನೆ 2.
ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ?
ಪ್ರಶ್ನೆ 3.
ಮನೆಮಂಚಮ್ಮನ ಕತೆ ಹೇಳಿದ ಕವಿಯ ಹೆಸರೇನು?
ಪ್ರಶ್ನೆ 4.
ಭಗವದ್ಗೀತೆಯನ್ನು ರಚಿಸಿದವರು ಯಾರು?
ಪ್ರಶ್ನೆ 5.
ದುಷ್ಟಬುದ್ದಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?
ಪ್ರಶ್ನೆ 6.
ಹಕ್ಕಿಯು ಯಾವುದರ ಸಂಕೇತವಾಗಿದೆ?
ಪ್ರಶ್ನೆ 7.
ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು?
ಪ್ರಶ್ನೆ 8.
ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?
ಪ್ರಶ್ನೆ 9.
ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
II ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 10 × 2 = 20
ಪ್ರಶ್ನೆ 10.
ಸಾಮ್ರಾಟರ ರಾಜ್ಯಾಭೀಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು?
ಪ್ರಶ್ನೆ 11.
ಅಶೋಕ ಪೈ ಅವರು ಹೇಳಿದ ಸಂಶೋಧನಾ ಸತ್ಯವನ್ನು ತಿಳಿಸಿ.
ಪ್ರಶ್ನೆ 12.
ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು?
ಪ್ರಶ್ನೆ 13.
ಹುಷ್ಟಬುದ್ಧಿಯು ತನ್ನ ತಂದೆಯನ್ನು ಸಾಕ್ಷಿ ಮಾಡಿ ಒಪ್ಪಿಸಿದ ಬಗೆಯನ್ನು ತಿಳಿಸಿ.
ಪ್ರಶ್ನೆ 14.
ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ?
ಪ್ರಶ್ನೆ 15.
ದ್ರುಪದನ ಮಾತಿಗೆ ದ್ರೋಣನ ಪ್ರತಿಕ್ರಿಯೆಯನ್ನು ತಿಳಿಸಿ.
ಪ್ರಶ್ನೆ 16.
ಭಗತ್ ಸಿಂಗನು ಅಂತರ್ಮುಖಿಯಾಗಲು ಕಾರಣವಾದ ಒಕ್ಕಣೆಯನ್ನು ತಿಳಿಸಿ.
ಪ್ರಶ್ನೆ 17.
ಮೃಗದ ಬಾಹ್ಯ ಆಕಾರ ಹೇಗಿತ್ತು?
ಪ್ರಶ್ನೆ 18.
ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು?
ಪ್ರಶ್ನೆ 19.
“ಬೀಸುಕಲ್ಲು” ಎಂಬ ಉತ್ತರ ಬರಲು ಹೇಳಿದ ಒಗಟನ್ನು ಬರೆಯಿರಿ.
III. ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯಗಳನ್ನು ಬರೆಯಿರಿ. 4 × 3 = 12
ಪ್ರಶ್ನೆ 20.
“ಸಾಮಾಜಿಕ ಕಾನೂನುಗಳ ಹರಿಕಾರ”
ಪ್ರಶ್ನೆ 21.
“ರಿಸಿಯರ ರೂಪಂ ಕಾಣ್ಣುಮಂದೀತನುಂ ಗಪಂಬಡುಗುಮ್”
ಪ್ರಶ್ನೆ 22.
“ಮಂಗಳ ಲೋಕದ ಅಂಗಳಕೇರಿ”
ಪ್ರಶ್ನೆ 23.
“ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ”
IV. ಈ ಕೆಳಗಿನ ಕವಿಗಳ/ಸಾಹಿತಿಗಳ ಸ್ಥಳ, ಕಾಲ, ಕೃತಿ, ಮತ್ತು ಪ್ರಶಸ್ತಿ/ಬಿರುದುಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ. 2 × 3 = 6
ಪ್ರಶ್ನೆ 24.
ಕುವೆಂಪು
ಪ್ರಶ್ನೆ 25.
ಸಾ.ರಾ. ಅಬೂಬಕ್ಕರ್ –
V
ಪ್ರಶ್ನೆ 26.
ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ. 1X3 = 3
VI.
ಪ್ರಶ್ನೆ 27.
ಈ ಕೆಳಗಿನ ಪದ್ಯಭಾಗವನ್ನು ಓದಿ ಅರ್ಥ ಮಾಡಿಕೊಂಡು, ಅಡಕವಾಗಿರುವ ಮೌಲ್ಯವನ್ನಾದರಿಸಿ ಸಾರಾಂಶ ಬರೆಯಿರಿ. 1 X 4 = 4
ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಟ್ಟೋಣ
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ
VII. ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 2 × 4 = 8
ಪ್ರಶ್ನೆ 28.
ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆಯೆಂಬುದನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ. ಅಥವಾ ಶಬರಿಯ ಸಡಗರ, ಸಂತೋಷವು ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ?
ಪ್ರಶ್ನೆ 29.
ಭೀಷ್ಮ ಮತ್ತು ದುರ್ಯೋಧನರ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ. ಅಥವಾ ದುರ್ಯೋಧನನ ಛಲದ ಗುಣ ಅವನ ಮಾತುಗಳಲ್ಲಿ ವ್ಯಕ್ತವಾಗಿರುವ ಬಗೆಯನ್ನು ವಿವರಿಸಿ.
VIII.
ಪ್ರಶ್ನೆ 30.
ಈ ಕೆಳಗಿನ ಗದ್ಯಭಾಗವನ್ನು ಮನಸ್ಸಿನಲ್ಲಿ ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. 2 × 2 = 4
ಬೆಳಗಾವಿಯ ಒಂದು ಬಡಾವಣೆ, ಅಲ್ಲಿನ ನಿವಾಸಿಗಳು ಪ್ರತಿನಿತ್ಯ ಮನೆಯ ಕಸಗುಡಿಸಿ ತಂದು ರಸ್ತೆಗೆ ಸುರಿಯುತ್ತಿದ್ದರು. ಅವರಲ್ಲೊಬ್ಬರನ್ನು “ಕಸತಂದು ರಸ್ತೆಗೆ ಯಾಕೆ ಹಾಕೀರ? ತೊಟ್ಟೆಗೆ ಯಾಕೆ ಹಾಕಲ್ಲ?” ಎಂದು ಕೇಳಿದಾಗ ಹೀಗೆ ಗುಡುಗಿದರು; “ಮೊದದ್ದಾಗಿ, ತೊಟ್ಟಿ ಈ ರಸ್ತೆಯ ತುದೀಲಿದೆ. ಎರಡನೆಯದಾಗಿ, ನಾವ್ಯಾಕೆ ಅಲ್ಲಿಯವರೆಗೂ ತೆಗೆದುಕೊಂಡು ಹೋಗಿ ಹಾಕ್ಷೇಕು? ನಾವು ಹೊರಗೆ ಸುರೀತೀವಿ. ಸಂಬಳ ತಗೋತಾರಲ್ಲ ಮಹಾನಗರ ಪಾಲಿಕೆ ಆಳುಗಳು, ಅವರು ತಗೊಂಡು ಹೋಗಿ ಹಾಕ್ಲಿ ತೊಟ್ಟಿಲಿ”. “ಆದ್ರೆ ನಿಮ್ಮ ರಸ್ತೆನೇ ಕೊಳೆ ಆಗುತ್ತಲ್ಲ ಮನೆ ಮುಂದೆ ಕಸ ಹಾಕಿದ್ರೆ” ಅಂದಾಗ “ರಸ್ತೆ ನಮ್ಮು ಅಂತ ಯಾರು ಹೇಳಿದ್ರು ನಿಮಗೆ? ಈ ಮನೆ ನಮ್ಮು, ರಸ್ತೆ ಸರ್ಕಾರದ್ದು. ಅದನ್ನು ಸರಿಯಾಗಿ ಇಟ್ಟುಕೊಳ್ಳೋದು ಅವರ ಕೆಲಸ” ಅಂದರು. ಈ ಉದಾಹರಣೆ ನಮ್ಮ ಪರಿಸರದ ಬಗ್ಗೆ ಜನಸಾಮಾನ್ಯರಲ್ಲಿರುವ ಅಕ್ಷಮ್ಯವಾದ ಬೇಜವಾಬ್ದಾರಿತವನ್ನು ಎತ್ತಿ ತೋರಿಸುತ್ತದೆ. ಪರಿಸರ ಸಂರಕ್ಷಣೆಯ ಸಮಸ್ತ ಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಪರಿಸರ ಸಂರಕ್ಷಣೆಯ ಸಮಸ್ತ ಜವಾಬ್ದಾರಿಯೂ ಸರ್ಕಾರದ್ದೇ ಎಂಬ ನಿರ್ಲಿಪ್ತ ಮನೋಭಾವವೇ ನಮ್ಮೆಲ್ಲ ಸಮಸ್ಯೆಗಳಿಗೂ ಕಾರಣ.
ಪರಿಸರ ಪ್ರಜ್ಞೆಯ ತೀವ್ರ ಅಭಾವ ಬಹುಸಾಮಾನ್ಯವಾದರೂ ಪರಿಸರವನ್ನು ಸಂರಕ್ಷಿಸಲು ಹೋರಾಟಕ್ಕೆ ನಿಲ್ಲುವ ಅಪೂರ್ವ ಪ್ರಯತ್ನಗಳನ್ನು ನಾವು ಆಗಾಗ ಅಪರೂಪವಾಗಿ ನೋಡಬಹುದು. ‘ಚಿಪ್ರೋ ಚಳವಳಿ’. ಇದಕ್ಕೊಂದು ಉತ್ತಮ ಉದಾಹರಣೆ. ಚಿಪ್ಟ್ – ಈ ಹೆಸರು ನಿಮಗೆ ವಿಚಿತ್ರವಾಗಿ ಕೇಳಬಹುದು. ಇದೊಂದು ಹಿಂದಿ ಭಾಷೆಯ ಪದ. ಅರ್ಥ: ಅಪ್ಪಿಕೋ, ತಬ್ಬಿಕೊ! ಈ ಚಳವಳಿ ಪ್ರಾರಂಭವಾದದ್ದು 1973ರ, ಉತ್ತರ ಪ್ರದೇಶದ ಚಮೋಲಿ ಜಿಲ್ಲೆಯ ಮಂಡಲ್ ಎಂಬ ಹಳ್ಳಿಯಲ್ಲಿ. ಈ ಚಳವಳಿಗೆ ಕಾರಣರಾದವರು ಮಂಡಲ್ ಹಳ್ಳಿಯ ಅನಕ್ಷರಸ್ಥ ಮಹಿಳೆಯರು.
ಪ್ರಶ್ನೆಗಳು:
(ಅ) ಚಿಪ್ಪೋ ಚಳವಳಿಯನ್ನು ಕುರಿತು ಬರೆಯಿರಿ.
(ಆ) ಪರಿಸರದ ಸ್ವಚ್ಛತೆಯ ಕುರಿತು ಜನಸಾಮಾನ್ಯರಲ್ಲಿರುವ ಸಾಮಾನ್ಯ ಮನೋಭವನೆಗಳೇನು?
ವಿಭಾಗ – ‘ಬಿ’.
(ಅನ್ವಯಿಕ ವ್ಯಾಕರಣ, ಅಲಂಕಾರ ಹಾಗೂ ಛಂದಸ್ಸು)
ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದುದನ್ನು ಆರಿಸಿ ಉತ್ತರಕ್ಕಾಗಿಯೇ ಕೊಟ್ಟಿರುವ ಜಾಗದಲ್ಲಿ ಕ್ರಮಾಕ್ಷರದೊಂದಿಗೆ ಬರೆಯಿರಿ. 10 × 1 = 10
ಪ್ರಶ್ನೆ 31.
“ಸಂಗ್ರಹಾಲಯ” ಪದವು ಈ ಸಂಧಿಗೆ ಉದಾಹರಣೆಯಾಗಿದೆ
(ಎ) ಗುಣ ಸಂಧಿ
(ಬ) ಸವರ್ಣದೀರ್ಘ ಸಂಧಿ
(ಸಿ) ವೃದ್ಧಿ ಸಂಧಿ
(ಡಿ) ಅನುನಾಸಿಕ ಸಂಧಿ
ಪ್ರಶ್ನೆ 32.
ಸಂಭೋಧನೆಯ ಮುಂದೆ ಹಾಗೂ ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣಾ ಬಿಟ್ಟು ಉಳಿದವುಗಳ ಮುಂದೆ ಬಳಸುವ ಲೇಖನ ಚಿಹ್ನೆ.
(ಎ) ಅಲ್ಪವಿರಾಮ
(ಬ) ಅರ್ಧವಿರಾಮ
(ಸಿ) ಪೂರ್ಣವಿರಾಮ
(ಡಿ) ಉದ್ದರಣ
ಪ್ರಶ್ನೆ 33.
‘ಕರ್ಮಧಾರೆಯ’ ಸಮಾಜಕ್ಕೆ ಉದಾಹರಣೆಯಿದು
(ಎ) ನೆಯ್ದ ವಸ್ತ್ರ
(ಬ) ಮಹೀಪತಿ
(ಸಿ) ಕಣ್ಣೆರೆ
(ಡಿ) ಹೆದ್ದೊರೆ
ಪ್ರಶ್ನೆ 34.
ಕನ್ನಡ ವರ್ಣಮಾಲಿಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ.
(ಎ) ಐದು
(ಬ) ಒಂಬತ್ತು
(ಸಿ) ಹತ್ತು
(ಡಿ) ಹದಿಮೂರು
ಪ್ರಶ್ನೆ 35.
ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳನ್ನು ಹೀಗೆನ್ನುತ್ತೇವೆ.
(ಎ) ಕ್ರಿಯಾರ್ಥಕ
(ಬ) ಅನುಕರಣ
(ಸಿ) ಸಾಮಾನ್ಯ
(ಡಿ) ಸಂಬಂಧಾರ್ಥಕ
ಪ್ರಶ್ನೆ 36.
ಕೃದಂತಭಾವನಾಮಕ್ಕೆ ಉದಾಹರಣೆಯಾಗಿರುವ ಪದ
(ಎ) ನೋಟ
(ಬ) ನೋಡಲು
(ಸಿ) ನೋಡುವ
(ಡಿ) ನೋಡದ
ಪ್ರಶ್ನೆ 37.
ಕಾರವಾರದಲ್ಲಿ ಮಲೇರಿಯಾ ಹಬ್ಬಿ, ವೀರೇಶ್ವರ ಪಾಠಕ್‌ರವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ, ಅವರು ಅಲ್ಲಿಂದ ವರ್ಗಾವಣೆ ಹೊಂದುವಂತೆ ಆಯಿತು – ಈ ವಾಕ್ಯವು
(ಎ) ಮಿಶ್ರ ವಾಕ್ಯ
(ಬ) ಸಾಮಾನ್ಯ ವಾಕ್ಯ
(ಸಿ) ಸಂಯೋಜಿತ ವಾಕ್ಯ
(ಡಿ) ಪ್ರಶ್ನಾರ್ಥಕ ವಾಕ್ಯ
ಪ್ರಶ್ನೆ 38.
‘ಮಾಡೇವು’ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ
(ಎ) ವಿಧ್ಯರ್ಥಕ
(ಬ) ಸಂಬಂಧಾರ್ಥಕ
(ಸಿ) ನಿಷೇಧಾರ್ಥಕ
(ಡಿ) ಸಂಭಾವನಾರ್ಥಕ
ಪ್ರಶ್ನೆ 39.
‘ಸಾವಿತ್ರಿಯೊಳ್’ ಪದದಲ್ಲಿರುವ ವಿಭಕ್ತಿಯಿದು
(ಎ) ಪ್ರಥಮಾ
(ಬ) ತೃತೀಯಾ
(ಸಿ) ಪಂಚಮಿ
(ಡಿ) ಸಪ್ತಮಿ
ಪ್ರಶ್ನೆ 40.
ಆತ್ಮಾರ್ಥಕ ಸರ್ವನಾಮ ಪದವಿದು
(ಎ) ನಿಮ್ಮ
(ಬ) ತಮ್ಮ
(ಸಿ) ನೀವು
(ಡಿ) ಅವರು
VII. ಈ ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂದಿ ಪದವನ್ನು ಬರೆಯಿರಿ. 4 × 1 = 4
ಪ್ರಶ್ನೆ 41.
ಊರೂರು : ದ್ವಿರುಕ್ತಿ : : ಕೆನೆಮೊಸರು : __________________
ಪ್ರಶ್ನೆ 42.
ಯುದ್ಧ : ಬುದ್ದ : : ಪ್ರಸಾದ : ____________________
ಪ್ರಶ್ನೆ 43.
ಶ್ರಮಣಿ : ತಪಸ್ವಿನಿ : : ಸುರಭಿ : ________________
ಪ್ರಶ್ನೆ 44.
ಆಸ್ಪತ್ರೆ : ಪೋರ್ಚ್‌ಗೀಸ್ : : ದವಾಖಾನೆ : ________________
ಪ್ರಶ್ನೆ 45.
ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಛಂದಸ್ಸಿನ ಹೆಸರನ್ನು ಬರೆಯಿರಿ. 1 × 3 = 3
ಪುಟ್ಟಿದ ನೂರ್ವರು ಮೆನ್ನೊಡ
ಖಳನೊ ಳೊವಿಂಗೆ ಕುಪ್ಪೆ ವ ರಮೆಂಬ
ಅಥವಾ
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ
ವೊಲಾಂಬ ರಮುಂಟೆ ನಿನ್ನದೊಂ
ಪ್ರಶ್ನೆ 46.
ಈ ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಗೊಳಿಸಿ. 1 × 3 = 3
“ಮಾರಿಗೌತಣವಾಯ್ತು ನಾಳಿನ ಭಾರತವು”
ಅಥವಾ
“ಆಚೋದ ಸರೋವರವು ತೈಲೋಕ್ಯಲಕ್ಷ್ಮಿಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.”
ಪ್ರಶ್ನೆ 47.
ಈ ಕೆಳಗೆ ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ. 1 × 3 = 3
- ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
- ದೇಶ ನೋಡು; ಕೋಶ ಓದು
- ಆಳಾಗಬಲ್ಲವನು ಅರಸಾಗಬಲ್ಲನು
ಪ್ರಶ್ನೆ 48.
ನಿಮ್ಮನ್ನು ಇಳಕಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ‘ಯಶೋಧಾ’ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಏರ್ಪಡಿಸಿದ ‘ವಿದ್ಯಾರ್ಥಿನಿಯರ ಕರಾಟೆ ಕೌಶಲ ತರಬೇತಿ’ಯ ಸಮಾರೋಪ ಸಮಾರಂಭದ ವರದಿಯನ್ನು ಪ್ರಕಟಿಸುವಂತೆ ಕೋರಿ ‘ಕನ್ನಡಪ್ರಭ’ ದಿನಪತ್ರಿಕೆಯ ಸಂಪಾದಕರಿಗೆ ಮನವಿ ಪತ್ರವೊಂದನ್ನು ಬರೆಯಿರಿ. 1 × 5=5
ಅಥವಾ
ನಿಮ್ಮನ್ನು ಐಶ್ವರ್ಯ ನಗರದಲ್ಲಿ ವಾಸವಾಗಿರುವ ‘ರಾಜೇಶ್ವರಿ’ ಎಂದು ಭಾವಿಸಿಕೊಂಡು, ಶಾಲೆಯಲ್ಲಿ ಆಚರಿಸಿದ ವಾರ್ಷಿಕೋತ್ಸವ ಕಾರ್ಯಕ್ರಮಗಳ
ವಿಶೇಷತೆಯನ್ನು ಕುರಿತು ಬಾದಾಮಿಯ ಪುಲಿಕೇಶಿ ನಗರದಲ್ಲಿರುವ ಅಣ್ಣ ‘ಬಸವೇಶ’ ನಿಗೆ ಪತ್ರವೊಂದನ್ನು ಬರೆಯಿರಿ.
ಪ್ರಶ್ನೆ 49.
ಈ ಕೆಳಗಿನ ಯಾವುದಾದರೂ ಒಂದನ್ನು ಕುರಿತು ಹದಿನೈದು ವಾಕ್ಯಗಳಿಗೆ ಕಡಿಮೆ ಇಲ್ಲದಂತೆ ಪ್ರಬಂಧ ಬರೆಯಿರಿ.
- ಸ್ವಚ್ಛ ಭಾರತ ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾತ್ರ
- ರಾಷ್ಟ್ರೀಯ ಭಾವೈಕ್ಯತೆಯಲ್ಲಿ ರಾಷ್ಟ್ರೀಯ ಹಬ್ಬಗಳ ಮಹತ್ವ
- ಮಹಿಳಾ ಸಬಲೀಕರಣ.
ಪ್ರಥಮ ಭಾಷೆ ಕನ್ನಡ
ಸಮಯ : 3 ಗಂಟೆ
ಅಂಕಗಳು : 100
ವಿಭಾಗ – ‘ಎ’
(ಪಠ್ಯಗಳ ಅಧ್ಯಯನ – ಗದ್ಯ ಪದ್ಯ, ಪೋಷಕ ಅಧ್ಯಯನ)
I.
ಉತ್ತರ 1:
ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರು ಟ್ರಾಫಾರ್ ಸೈರ್.
ಉತ್ತರ 2:
ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಇಂದಿಗೂ ‘ಎಂಜಿನಿಯರ್ ದಿನಾಚರಣೆ’ ಯನ್ನು ಆಚರಿಸಲಾಗುತ್ತಿದೆ.
ಉತ್ತರ 3:
ಕವಿ ಸಿದ್ಧಲಿಂಗಯ್ಯ ಅವರು ಮನೆ ಮಂಚಮ್ಮ ಎಂಬ ಗ್ರಾಮದೇವತೆಯ ಕತೆ ಹೇಳಿದ್ದಾರೆ.
ಉತ್ತರ 4:
ಭಗವದ್ಗೀತೆಯು ರಚಿಸಿದವರು ಮಹರ್ಷಿ ವೇದವ್ಯಾಸರು.
ಉತ್ತರ 5:
ಮರದ ಬುಡದಲ್ಲಿ ಸಂಪತ್ತನ್ನು ಕಾಣದೆ ಎಲ್ಲ ಸಂಪತ್ತನ್ನು ನೀನೇ ತೆಗೆದುಕೊಂಡಿದ್ದೀಯೆ ಎಂದು ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಆರೋಪ ಮಾಡುತ್ತಾನೆ.
ಉತ್ತರ 6:
ಹಕ್ಕಿಯು ಕಾಲದ ಸಂಕೇತವಾಗಿದೆ.
ಉತ್ತರ 7:
ಕತ್ತಿ ಹಿಡಿದು ಹೋರಾಡುವ ಹಲಗಲಿ ಬಂಟರು ಇನ್ನು ಮುಂದೆ ಶಸ್ತವನ್ನು ಹಿಡಿಯಬಾರದು ಎಂದು ಇಂಗ್ಲೆಂಡಿನಿಂದ ಕುಂಪಣಿ ಸರಕಾರ ಆದೇಶ ಹೊರಡಿಸಿತು.
ಉತ್ತರ 8:
ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು.
ಉತ್ತರ 9:
ಪುಟ್ಟ ಪೋರಿ ಮುಸುರೆ ತಿಕ್ಕುತ್ತಿದ್ದಾಳೆ.
II ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
ಉತ್ತರ 10:
ಲಂಡನ್‌ನಲ್ಲಿ ಸಾಮ್ರಾಟರ ರಾಜ್ಯಭೀಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂರಬೇಕು. ಈ ಶಿಲೆಯನ್ನು ಒಳಗೊಂಡ ಸಿಂಹಾಸನವು ವೆಸ್ಟ್ ಮಿನ್‌ಸ್ಟರ್ ಮಂದಿರದ ಒಂದು ಭಾಗದಲ್ಲಿದೆ. ಅದನ್ನು ‘ಸ್ಫೋನ್ ಆಫ್ ಸೈನ್’ ಎಂದು ಕರೆಯುತ್ತಾರೆ.
ಉತ್ತರ 11:
ಶಿವಮೊಗ್ಗದ ಡಾ. ಅಶೋಕ ಪೈ (ಮನೋವೈದ್ಯರು) ಅವರು ಮೈಸೂರಿಗೆ ಬಂದಿದ್ದರು. ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು. ಏನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಷನ್‌ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಷನ್‌ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ.
ಉತ್ತರ 12:
ಯಾರನ್ನೇ ಆಗಲಿ, ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವಷ್ಟೆ. ಆದುದರಿಂದ ಹುಲಿಯು ಹಿಂದಿನಿಂದ ಹಾರಿ ಶಾನುಭೋಗರನ್ನು ಕೊಲ್ಲಲಿಲ್ಲ.
ಉತ್ತರ 13:
ದುಷ್ಟಬುದ್ಧಿಯು ಮನೆಗೆ ಬಂದು ಏಕಾಂತದಲ್ಲಿ ತನ್ನ ತಂದೆಯ ಕೈಯನ್ನು ಹಿಡಿದು ರಹಸ್ಯವಾಗಿ ಅಲ್ಲಿಯವರೆಗೂ ನಡೆದ ಘಟನೆಗಳನ್ನು ತಿಳಿಸಿ “ನಿಮ್ಮ ಒಂದು ಮಾತಿನಿಂದ ಮಾತ್ರ ನಾವು ಹಸಿವಿನಿಂದ ಇರದೆ ಹಲವು ಕಾಲ ಸುಖದಿಂದ ಬಾಳುವಷ್ಟು ಸಂಪತ್ತನ್ನು (ಗಳಿಸಲು; ಉಳಿಸಲು ಸಾಧ್ಯ. ನೀವು ಆ ಮರದ ಪೊಟರೆಯೊಳಗೆ ಅಡಗಿ ಕುಳಿತುಕೊಳ್ಳಿ ಎಲ್ಲರೂ ಮರವನ್ನು ಸಾಕ್ಷಿ ಕೇಳಿದಾಗ ನೀವು ಒಳಗಿನಿಂದಲೇ (ವೃಕ್ಷ ಸಾಕ್ಷಿ) “ಧರ್ಮಬುದ್ದಿಯೇ ಸಂಪತ್ತನ್ನು ಕೊಂಡೊಯ್ದನು ಎಂದು ಹೇಳಿರಿ” ಎಂದನು.
ಉತ್ತರ 14:
ಲಾವಣಿಗಳು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ, ವೀರತನ, ಸಾಹಸವನ್ನು ವರ್ಣಿಸುವುದರಿಂದ ಲಾವಣಿ ಎಂದರೆ ವೀರಗೀತೆ ಎಂದು ಕರೆಯುವುದು ವಾಡಿಕೆ. ಏಕ ಘಟನೆಯನ್ನಾಧರಿಸಿದ್ದು ಕಥಾನಾತ್ಮಕವಾಗಿರುವ ಲಾವಣಿಗಳು ಹಾಡಿನ ರೂಪದಲ್ಲಿ ಕಟ್ಟಿದ ಕತೆ. ಜನಸಾಮಾನ್ಯರು ರಚಿಸಿರುವ ಲಾವಣಿಗಳು ವಸ್ತುನಿಷ್ಠವಾಗಿರುತ್ತವೆ. ಹಿಂದಿನಿಂದ ವಾಕ್ಷರಂಪರೆಯಲ್ಲಿ ಉಳಿದು ಬಂದಿದ್ದು, ಐತಿಹಾಸಿಕ ಮಹತ್ವ ಪಡೆದಿವೆ. ಗದ್ಯದ ಹೊಳಲನ್ನು, ಭಾವಗೀತದ ಸತ್ವವನ್ನು ಹೊಂದಿರುವ ಲಾವಣಿಗಳು ಧ್ವನಿ ರಮ್ಯತೆಯನ್ನೂ, ಅರ್ಥಸೌಂದರ್ಯವನ್ನು ಹೊಂದಿವೆ.
ಉತ್ತರ 15:
ದ್ರುಪದನ ಮಾತಿಗೆ ದ್ರೋಣನು ಪ್ರತ್ಯುತ್ತರವಾಗಿ “ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು” ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೇ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದೇ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾ ಮಂಡಲದಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸುತ್ತೇನೆ ಎಂದನು.
ಉತ್ತರ 16:
ಏಪ್ರಿಲ್ 13, 1919 ರಂದು ಬ್ರಿಟಿಷರ ಗುಂಡುಗಳಿಗೆ ಆಹುತಿಯಾದ ಸುಮಾರು 2000 ಮುಗ್ಗ ಹಿಂದೂ ಸಿಖ್ ಮತ್ತು ಮುಸಲ್ಮನವರ ಸಮ್ಮಿಶ್ರಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ ಎಂಬ ಒಕ್ಕಣೆಯು ಜಲಿಯನ್ ವಾಲಾಬಾಗ್‌ನಲ್ಲಿದೆ. ಈ ಒಕ್ಕಣೆಯು ಭಗತ್‌ಸಿಂಗ್‌ನು ಅಂತರರ್ಮುಖಿಯಾಗಲು ಕಾರಣವಾಯಿತು.
ಉತ್ತರ 17:
ಮೃಗದ ಬಾಹ್ಯ ಆಕಾರ ಭೀಕರವಾಗಿತ್ತು. ಕೋರೆಹಲ್ಲು, ಹಂದಿಯದೇಹ, ತೋಳದ ಚಲನೆಯನ್ನು ಪಡೆದಿದ್ದ ಮೃಗ ಕರ್ಕಶ ಸದ್ದು, ಗೊಗ್ಗರು ಧ್ವನಿಯನ್ನು ಹೊಂದಿತ್ತು.
ಉತ್ತರ 18:
ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ ಸ್ವಾಮಿ ವಿವೇಕಾನಂದರಿಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು. “ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ” ಎಂಬುದು ಸ್ವಾಮಿ ವಿವೇಕಾನಂದರ ಅಭಿಪ್ರಾಯವಾಗಿದೆ.
ಉತ್ತರ 19.:
‘ಬಗಲಲ್ಲಿ ಕುಕ್ಕುವುದು ಬಾಯಲ್ಲಿ ತಿಂಬೂದು ನಂಗಏಲಿ ಅರ್ತು ಈ ಹಾಸಿನ – ಹೇಳಿರೆ ಕೈಗೆ ಹಲ್ಮುರು ಕೊಡುವೆನು
III. ಈ ಕೆಳಗಿನ ಹೇಳಿಕೆಗಳಿಗೆ ಸಂದರ್ಭ ಮತ್ತು ಸ್ವಾರಸ್ಯಗಳನ್ನು ಬರೆಯಿರಿ.
ಉತ್ತರ 20:
ಈ ವಾಕ್ಯವನ್ನು ಡಿ.ಎಸ್. ಜಯಪ್ಪಗೌಡ ವಿರಚಿತ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು ಎಂಬ ಸಂಶೋಧನಾ ಗ್ರಂಥದ ಒಂದು ಭಾಗವಾಗಿರುವ ‘ಭಾಗ್ಯಶಿಲ್ಪಿಗಳು’ ಎಂಬ ಗದ್ಯಭಾಗದಿಂದ ಆಯ್ಕೆ ಮಾಡಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಹಲವು ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು. ಆ ಕಾರಣಕ್ಕಾಗಿ ‘ಸಾಮಾಜಿಕ ಕಾನೂನುಗಳ ಹರಿಕಾರ’ ಎಂಬ ಬಿರುದಿಗೆ ಪಾತ್ರರಾದರು. ಮಹಾರಾಜರಾಗಿ ರಾಜ ಪದವಿಯನ್ನು ಹೊಂದಿದ್ದರೂ ಸಹ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದರು ಎಂಬ ಸ್ವಾರಸ್ಯವನ್ನು ಇಲ್ಲಿ ಕಾಣಬಹುದಾಗಿದೆ.
ಉತ್ತರ 21:
ಈ ವಾಕ್ಯವನ್ನು ಶಿವಕೋಟ್ಯಾಚಾರರು ರಚಿಸಿರುವ ವಡ್ಡಾರಾಧನೆ ಎಂಬ ಕೃತಿಯ ಒಂದು ಭಾಗವಾಗಿರುವ ‘ಸುಕುಮಾರಸ್ವಾಮಿಯ ಕಥೆ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸುಕುಮಾರನು ಹೆಸರಿಗೆ ತಕ್ಕಂತೆ ಸುಕುಮಾರನಾಗಿಯೇ ಸುಖ ಭೋಗಗಳನ್ನು ಅನುಭವಿಸುತ್ತಾ ಇರುವಾಗ ಒಬ್ಬ ಜೋಯಿಸರು ಅರಮನೆಗೆ ಬಂದು ಸುಕುಮಾರನ ಬಗ್ಗೆ ಭವಿಷ್ಯವನ್ನು ನುಡಿದ ಸಂದರ್ಭದ ಮಾತು ಇದಾಗಿದೆ.
ಉತ್ತರ 22:
ಈ ವಾಕ್ಯವನ್ನು ದ.ರಾ. ಬೇಂದ್ರೆಯವರು ಬರೆದಿರುವ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಈ ಮಾತನ್ನು ಕವಿ ಹೇಳಿದ್ದಾನೆ.
ಹಕ್ಕಿಯು ಬೆಳ್ಳಿ ಹಳ್ಳಿಯನ್ನು ಎಂದರೆ ಶುಕ್ರಗ್ರಹವನ್ನು ದಾಟಿ, ಮುಂದೆ ಹೋಗಿ ಮಂಗಳ ಲೋಕದ ಅಂಗಳಕ್ಕೆ ಏರಿದೆ ಎಂದು ಸಮಯದ ಬಗ್ಗೆ ದ.ರಾ. ಬೇಂದ್ರೆಯವರನ ಹೇಳಿದ್ದಾರೆ.
ಉತ್ತರ 23:
ಈ ವಾಕ್ಯವನ್ನು ಲಕ್ಷ್ಮೀಶ ಕವಿಯು ರಚಿಸಿರುವ ‘ವೀರಲವ’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಆಕರಗ್ರಂಥ : ಲಕ್ಷ್ಮೀಶ ವಿರಚಿತ ಜೈಮಿನಿಭಾರತ ಕಾವ್ಯವನ್ನು ದೇವುಡು ನರಸಿಂಹಶಾಸ್ತ್ರೀ ಮತ್ತು ಬಿ. ಶಿವಮೂರ್ತಿ ಶಾಸ್ತ್ರೀ ಇವರು ಸಂಪಾದಿಸಿದ್ದು ಅದರ ಇಪ್ಪತ್ತನೆಯ ಸಂಧಿಯಿಂದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಮಾತನ್ನು ಅವನು ಹೇಳಿದ್ದಾನೆ.
ಕುದುರೆಯ ಹಣೆಯಲ್ಲಿ ಪತ್ರವನ್ನು ಓದಿಕೊಂಡು, “ಈಗ ಕೌಸಲ್ಯಯು ಏಕ ವೀರ ಮಾತೆಯಾಗಿರುವಳು, ಆಕೆಯ ಮಗನು ರಘೋಹನನಾದ ಶ್ರೀರಾಮನು. ಆವನು ಈ ಕುದುರೆ (ಯಜ್ಞಾಶ್ವ)ಯನ್ನು ಬಿಟ್ಟಿರುವನು. ಬಲಿಷ್ಠನು ಇದನ್ನು ಹಿಡಿದು ಕಟ್ಟಲಿ” ಎಂದು ಬರೆದಿತ್ತು. ಆ ಪತ್ರದ ಅಭಿಪ್ರಾಯವನ್ನು ಲವನು ಬೇಗನೆ ಗ್ರಹಿಸಿದನು. ಏನು ನಮ್ಮ ತಾಯಿ ಬಂಜೆಯೇ? ಅಲ್ಲ ಅವಳು ವೀರ ಮಾತೆಯಲ್ಲವೆ? ಎಂದು ಹೇಳಿ ಆ
ಕುದುರೆಯನ್ನು ಲವನು ಹಿಡಿದನು. ತಾನು ಹೊದೆದಿದ್ದ ಬಟ್ಟೆಯನ್ನು ತೆಗೆದು ಕುದುರೆಯ ಕೊರಳಿಗೆ ಸುತ್ತಿ ಒಂದು ಬಾಳೆಯ ಗಿಡಕ್ಕೆ ಕಟ್ಟಿದನು.
IV.
ಉತ್ತರ 24:
ಕವಿ : ಕುವೆಂಪು
ಪೂರ್ಣ ಹೆಸರು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕಾಲ : 29.12.1904-1994
ಸ್ತಿಳ : ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು, ಕುಪ್ಪಳಿ
ಕೃತಿಗಳು : ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ, ನನ್ನ ದೇವರು ಮತ್ತು ಇತರ ಕಥೆಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ತಪೋನಂದನ ರಸೋವೈಸಃ, ಅಮಲನ ಕಥೆ, ಮೋಡಣ್ಣನ ತಮ್ಮ, ಉಪಮ್ಮನಹಳ್ಳಿಯ ಕಿಂದರಜೋಗಿ, ಜಲಗಾರ, ಯಮನ ಸೋಲು, ಬೆರಳೆ ಕೊರಳ್, ನೆನಪಿನ ದೋಣಿಯಲ್ಲಿ.
ಆಕರಗ್ರಂಥ : ಪಕ್ಷಿಕಾಶಿ
ಪ್ರಶಸ್ತಿ : ಕೇಂದ್ರ ಸಾಹಿತ್ಯ ಅಕಾಡಮಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಪದ್ಮವಿಭೂಷಣ, ಗೌರವ ಡಾಕ್ಟರೇಟ್, ರಾಷ್ಟ್ರಕವಿ ಪ್ರಶಸ್ತಿಗಳು.
ಉತ್ತರ 25:
ಲೇಖಕರು : ಸಾ.ರಾ. ಅಬೂಬಕ್ಕರ್
ಕಾಲ : 30 ಜೂನ್, 1936
ಸ್ತಿಳ: ಕಾಸರಗೋಡು
ಕೃತಿಗಳು .: ಚಂದ್ರಗಿರಿಯ ತೀರದಲ್ಲಿ, ಸಹನಾ, ಕದನ ವಿರಾಮ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ತಳ ಒಡೆದ ದೋಣಿಯಲ್ಲಿ
ಕವನ ಸಂಕಲನಗಳು : ಚಪ್ಪಲಿಗಳು, ಖೆಡ್ಡಾ, ಪಯಣ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು.
ಆಕರಗ್ರಂಥ .: ಚಪ್ಪಲಿಗಳು .
ಪ್ರಶಸ್ತಿ .: ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’
V.
ಉತ್ತರ 26:
ಮಾರಿಗೌತಣವಾಯ್ತು ನಾಳಿನ
ಭಾರತವು ಚತುರಂಗ ಬಲದಲಿ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸನು ರಾಜೀವಸಖನಾಣೆ
ಅಥವಾ
ಕೊರಳ ಸೆರೆ ಹಿಗ್ಗಿದವು ದೃಗುಜಲ
ಉರವಣಿಸಿ ಕಡು ನೊಂದನಕಟಾ
ಕುರುಪತಿಗೆ ಕೇಡಾದುದೆಂದು ತನ್ನ ಮನದೊಳಗೆ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ
VI.
ಉತ್ತರ 27:
ನಮ್ಮ ಸುತ್ತ ಮುತ್ತಲೂ ಕವಿದಿರುವ ಆಜ್ಞಾನವೆಂಬ ಕತ್ತಲೆಯನ್ನು ಕಳೆಯುವುದಕ್ಕಾಗಿ, ಅಂಧಕಾರವನ್ನು ಹೋಗಲಾಡಿಸುವುದಕ್ಕಾಗಿ ಪ್ರೀತಿಯ ಹಣತೆಯನ್ನು ಜ್ಞಾನದ ಜ್ಯೋತಿಯನ್ನು ಹಚ್ಚಣ, ಬಿರುಗಾಳಿಯಿಂದಾಗಿ ಹೊಯ್ದಾಡುತ್ತಿರುವ, ಹಡಗನ್ನು ಎಚ್ಚರದಿಂದ ಮುನ್ನಡೆಸೋಣ, ಸಂಸಾರ ಎಂಬ ಸಾಗರದಲ್ಲಿ ಅತಂತ್ರವಾಗಿರುವ ನಮ್ಮ ಜೀವನವನ್ನು ಎಚ್ಚರಿಕೆಯಿಂದ ನಡೆಸೋಣ, ಹೆಜ್ಜೆ ಹೆಜ್ಜೆಗೂ ಅನೇಕ ಸಮಸ್ಯೆಗಳು ನಮಗೆ ಸವಾಲಾಗಿ ನಿಲ್ಲುತ್ತವೆ. ಎದೆಗುಂದದೆ ಮುನ್ನಡೆಸಬೇಕಿದೆ.
VII.
ಉತ್ತರ 28:
ಶ್ರೀರಾಮನು ಸಕಲ ಸದ್ಗುಣಗಳ ಸಾಕಾರ ಮೂರ್ತಿ, ಶ್ರೀರಾಮನ ಗುಣಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ್ದ ಅಸಂಖ್ಯಾತ ಭಕ್ತರಲ್ಲಿ ಶಬರಿಯು ಒಬ್ಬಳು. ಈಕೆಯು ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ ಬ್ರಹ್ಮರ್ಷಿಗಳಿನಿಸಿದ್ದ ಮತಂಗ ಮಹರ್ಷಿಗಳ ಆಶ್ರಯದಲ್ಲಿದ್ದಳು. ಮತಂಗರು ದಿವ್ಯ ಲೋಕವನ್ನು ಸೇರಿದ ಬಳಿಕ ಶಬರಿಯು ರಾಮಧ್ಯಾನದಲ್ಲಿ ತೊಡಗಿ ಶ್ರೀರಾಮನ ದರ್ಶನಕ್ಕಾಗಿ ಕಾದಿದ್ದಳು. ಶ್ರೀರಾಮನ ಬರುವಿಕೆಗಾಗಿ ಕಾದು ಕಾದು ಕಾತರಿಸಿ ಮುಪ್ಪಾಗಿ ಭಕ್ತಿಯೇ ರೂಪುಗೊಂಡಂತೆ ಇದ್ದ ಶಬರಿಯನ್ನು ದರ್ಶಿಸುತ್ತಾರೆ. ಶಬರಿಯು ತನ್ನ ಆರಾಧ್ಯ ದೈವ ಶ್ರೀರಾಮನನ್ನು ಕಂಡು ಆನಂದಿಸುತ್ತಾಳೆ, ಧನ್ಯತೆಯ ಭಾವನೆಯಿಂದ ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮನು ಮುಕ್ತಿಯನ್ನು ಕರುಣಿಸುತ್ತಾನೆ. ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೀಗೆ ನಿಜವಾಗಿದೆ.
ಅಥವಾ
ಶಬರಿಯು ಶ್ರೀರಾಮನನ್ನು ಕಂಡು ಬೆರಗಾದಳು. ಅನಂತರ ಶ್ರೀರಾಮನ ಬಳಿಗೆ ಬಂದು ಅವನ ಮೈಯನ್ನು ಮುಟ್ಟಿ ಪಾದಕ್ಕೆ ನಮಸ್ಕರಿಸಿ ಅವನ ಕೈಯನ್ನು ಕಣ್ಣಿಗೊತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು. ಬನ್ನಿ ಬನ್ನಿ ಎಂದು ಪ್ರೀತಿಯಿಂದ ಆಶ್ರಮಕ್ಕೆ ಆಹ್ವಾನಿಸಿದಳು. ಅಯ್ಯೋ ಇಂದು ಏನೂ ಸಿದ್ಧತೆ ನಡೆಸಿಲ್ಲವೆ ಎಂದು ಪೇಚಾಡುತ್ತಾಳೆ. ನಿನ್ನೆಯಷ್ಟು ಚೆನ್ನಾಗಿ ಸಿದ್ಧತೆ ಮಾಡಿಕೊಂಡಿಲ್ಲ ಎಂದು ನೊಂದುಕೊಳ್ಳುತ್ತಾಳೆ. ತಾನು ಪ್ರೀತಿಯಿಂದ ಕಟ್ಟಿದ್ದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸುತ್ತಾಳೆ. ತಾನು ತಂದ ಹಣ್ಣನ್ನು ನೀಡುತ್ತ ಜಗತ್ತಿನಲ್ಲೇ ಇದರಷ್ಟು ರುಚಿಯಾದ ಹಣ್ಣು ಯಾವುದು ಇಲ್ಲ ಇದನ್ನು ಸವಿಯಿರಿ – ಎಂದು ನೀಡಿದಳು. ಇದರಿಂದ ಪ್ರಸನ್ನರಾದ ರಾಮಲಕ್ಷ್ಮಣರನ್ನು ಕಂಡು ಶಬರಿ ಧನ್ಯಭಾವದಿಂದ ಆನಂದಿಸಿದಳು, ನರ್ತಿಸಿದಳು.
ನಾನು ಈಗ ತುಂಬ ಸುಖಿಯಾಗಿಹೆನು. ನನ್ನ ಜೀವನದ ಮಹದಾಸೆ ನೆರವೇರಿದೆ. ನಾನು ಹಂಬಲ ಅಳಿದ ದುಂಬಿಯಾಗಿರುವೆನು, ನದಿ, ಹೊಳೆಯು ಸಮುದ್ರವನ್ನು ಸೇರುವಂತೆ ನನ್ನ ಮನಸ್ಸು ನಿರಾಳವಾಗಿದೆ. ನಿಮ್ಮನ್ನು ನೋಡಿ, ನಿಮ್ಮೊಡನೆ ಮಾತನಾಡಿ ನಿಮ್ಮ ದಣಿವನ್ನು ತಣಿಸಿ ನಾನು ಆನಂದಗೊಂಡಿದ್ದೇನೆ, ಇಂದು ನನ್ನ ಮನಸ್ಸಿನ ಭಾರ ಇಳಿದು ಹಗುರವಾಗಿದೆ. ಜೀವನ ಸಾರ್ಥಕವಾಗಿದೆ ಪರಲೋಕ ಕರ ನೀಡಿ ಕರೆಯುತ್ತಿದೆ. ನಾನು ಅತ್ಯಂತ ಸುಖಿಯಾಗಿರುವೆ ಎಂದಳು.
ಉತ್ತರ 29.
ಶರಶಯ್ಕೆಯಲ್ಲಿದ್ದ ಭೀಷ್ಕನು ದುರ್ಯೋಧನನಿಗೆ ಈ ರೀತಿ ಬುದ್ಧಿವಾದವನ್ನು ಹೇಳುತ್ತಾನೆ. “ಇನ್ನು ನಾನು ಹೇಳುವ ಮಾತನ್ನು ಒಪ್ಪಿಕೋ ಒಪುವೆಯಾದರೆ ಪಾಂಡವರನ್ನು ಒಡಂಬಡಿಸಿ ಒಪ್ಪಂದ ಮಾಡಿ ಮೊದಲಿನಂತೆ ಕೂಡಿ ನಡೆಯುವ ಹಾಗೆ ಮಾಡುವೆನು. ಈಗಲೂ ಅವರು ನಮ್ಮ ಮಾತನ್ನು ಕೇಳುತ್ತಾರೆ. ಅವರು ನಮ್ಮ ಮಾತನ್ನು ಮೀರುವುದಿಲ್ಲ ನೀನೂ ಕೂಡ ನಮ್ಮ ಮಾತನ್ನು ಮೀರದೆ ನಡೆದುಕೋ”, ಈ ಮಾತನ್ನು ಕೇಳಿ ದುರ್ಯೋಧನನು ಮುಗುಳುಕ್ಕನು. ಅವರನ್ನು ಕುರಿತು ಹೀಗೆ ಹೇಳಿದನು “ನಾನು ನಿಮಗೆ ನಮಸ್ಕಾರ ಮಾಡಿ ಹೋಗಬೇಕೆಂದು ಬಂದಿದ್ದೇನೆ.
ನಾನು ಶತ್ರುಗಳೊಡನೆ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. ಯುದ್ದದಲ್ಲಿ ನಾನು ಯಾವ ಕಾರ್ಯ ಮಾಡಬೇಕಾಗಿದೆ ಎಂಬುದನ್ನು ತಿಳಿಸಿ. ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಕೇವಲ ನನ್ನ ಛಲಕ್ಕಾಗಿ ಹೋರಾಡುತ್ತಿರುವೆನು. ನನ್ನ ಮಕ್ಕಳು ಹಾಗೂ ಸೋದರರನ್ನು ಕೊಂದಿರುವ ಪಾಂಡವರನ್ನು ಸೋಲಿಸಲು ಹೋರಾಡುವೆನು ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ಸಂಧಿಗೆ ಒಪ್ಪಲಾರೆನು”. ಕರ್ಣ ಹಾಗೂ ದುಶ್ಯಾಸನನನ್ನು ಕೊಂದಿರುವ ಅರ್ಜುನ ಹಾಗೂ ಭೀಮರನ್ನು ಕೊಲ್ಲುವುದಾಗಿ ಹೇಳುತ್ತಾನೆ.
ಅಥವಾ
ಭೀಷ್ಮನು ಶರಶಯ್ಕೆಯಲ್ಲಿದ್ದರೂ ಪಾಂಡವರು ಹಾಗೂ ಕೌರವರ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ತನ್ನ ಭೇಟಿಗೆ ಬಂದ ದುರ್ಯೋಧನನಿಗೆ ಪಾಂಡವರೊಡನೆ ಸಂಧಿ ಮಾಡಿಕೊಳ್ಳಲು ಸೂಚಿಸುತ್ತಾನೆ. ಆದರೆ ದುರ್ಯೋಧನನು ಅವರ ಮಾತಿಗೆ ಸಮ್ಮತವಿಲ್ಲವೆಂದು ತಿಳಿಸುತ್ತಾನೆ. ದುರ್ಯೋಧನನು ತಾನು ಭೂಮಿಗಾಗಿ ಹೋರಾಡುವುದರ ಬದಲು ಛಲಕ್ಕಾಗಿ ಹೋರಾಟ ಮಾಡುವುದಾಗಿ ತಿಳಿಸುತ್ತಾನೆ. ತನ್ನ ಬಂಟ ಕರ್ಣ, ಸೋದರ ದುಶ್ಯಾಸನನ ಹತ್ಯೆ ಮಾಡಿರುವ ಅರ್ಜುನ ಹಾಗೂ ಭೀಮರನ್ನು ಕೊಲ್ಲುವ ಛಲವನ್ನು ಹೊಂದಿರುತ್ತಾನೆ. ತನ್ನ ಮಕ್ಕಳು ಹಾಗೂ ಸಹೋದರರನ್ನು ಕೊಂದ ಪಾಂಡವರೊಡನೆ ಒಪ್ಪಂದ ಮಾಡಿಕೊಳ್ಳುವ ಭೀಷ್ಕರ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ಕೇವಲ ಪಾಂಡವರೊಡನೆ ಹೋರಾಡುವ ಛಲವನ್ನೇ ಮೆರೆಯುವೆನು ಎಂದು ದುರ್ಯೋಧನನು ಹೇಳುತ್ತಾನೆ.
VI. ಕೆಳಗಿನ ಗದ್ಯಭಾಗವನ್ನು ಓದಿಕೊಂಡು, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಉತ್ತರ 30:
ಅ. ಚಿಕ್ಕೋ – ಈ ಹೆಸರು ನಿಮಗೆ ವಿಚಿತ್ರವಾಗಿ ಕೇಳಬಹುದು. ಇದೊಂದು ಹಿಂದಿ ಭಾಷೆಯ ಪದ, ಅರ್ಥ; ಅಪ್ಪಿಕೋ, ತಬ್ಬಿಕೋ!
ಈ ಚಳವಳಿ ಪ್ರಾರಂಭವಾದದ್ದು 1973ರ ಉತ್ತರ ಪ್ರದೇಶದ ಚಮೋಲಿ ಜಿಲ್ಲೆಯ ಮಂಡಲ್ ಎಂಬ ಹಳ್ಳಿಯಲ್ಲಿ. ಈ ಚಳವಳಿಗೆ ಕಾರಣರಾದವರು ಮಂಡಲ್ ಹಳ್ಳಿಯ ಅನಕ್ಷರಸ್ಥ ಮಹಿಳೆಯರು.
ಆ. “ಕಸತಂದು ರಸ್ತೆಗೆ ಯಾಕೆ ಹಾಕೀರ? ತೊಟ್ಟೆಗೆ ಯಾಕೆ ಹಾಕಲ್ಲ?”, ಎಂದು ಕೇಳಿದಾಗ ಹೀಗೆ ಗುಡುಗಿದರು; “ಮೊದಿದ್ದಾಗಿ, ತೊಟ್ಟಿ ಈ ರಸ್ತೆಯ ತುದೀಲಿದೆ. ಎರಡನೆಯದಾಗಿ, ನಾವ್ಯಾಕೆ ಅಲ್ಲಿಯವರೆಗೂ ತೆಗೆದುಕೊಂಡು ಹೋಗಿ ಹಾಕ್ಷೇಕು? ನಾವು ಹೊರಗೆ ಸುರೀತೀವಿ. ಸಂಬಳ ತಗೋತಾರಲ್ಲ ಮಹಾನಗರ ಪಾಲಿಕೆ ಆಳುಗಳು, ಅವರು ತಗೊಂಡು ಹೋಗಿ ಹಾಕ್ಲಿ ತೊಟ್ಟಿಲಿ”, “ಆದ್ರೆ ನಿಮ್ಮ ರಸ್ತೆನೇ ಕೊಳೆ ಆಗುತ್ತಲ್ಲ ಮನೆ ಮುಂದೆ ಕಸ ಹಾಕಿದ್ರೆ” ಅಂದಾಗ “ರಸ್ತೆ ನಮ್ಮು ಅಂತ ಯಾರು ಹೇಳಿದ್ರು ನಿಮಗೆ? ಈ ಮನೆ ನಮ್ಮು, ರಸ್ತೆ ಸರ್ಕಾರದ್ದು. ಅದನ್ನು ಸರಿಯಾಗಿ ಇಟ್ಟುಕೊಳ್ಳೋದು ಅವರ ಕೆಲಸ” ಅಂದರು. ಈ ಉದಾಹರಣೆ ನಮ್ಮ ಪರಿಸರದ ಬಗ್ಗೆ ಜನಸಾಮಾನ್ಯರಲ್ಲಿರುವ ಅಕ್ಷಮ್ಯವಾದ ಬೇಜವಾಬ್ದಾರಿತವನ್ನು ಎತ್ತಿ ತೋರಿಸುತ್ತದೆ. :
ವಿಭಾಗ – ‘ಬಿ’.
(ಅನ್ವಯಿಕ ವ್ಯಾಕರಣ, ಅಲಂಕಾರ, ಛಂದಸ್ಸು)
ಉತ್ತರ 31:
(ಬಿ) ಸವರ್ಣದೀರ್ಘ ಸಂಧಿ
ಉತ್ತರ 32:
(ಎ) ಅಲ್ಪವಿರಾಮ
ಉತ್ತರ 33:
(ಡಿ) ಹೆದ್ದೊರೆ
ಉತ್ತರ 34:
(ಸಿ) ಹತ್ತು _
ಉತ್ತರ 35:
(ಎ) ಕ್ರಿಯಾರ್ಥಕ
ಉತ್ತರ 36:
(ಎ) ನೋಟ
ಉತ್ತರ 37:
(ಸಿ) ಸಂಯೋಜಿತ ವಾಕ್ಯ
ಉತ್ತರ 38:
(ಡಿ) ಸಂಭಾವನಾರ್ಥಕ
ಉತ್ತರ 39:
(ಡಿ) ಸಪ್ತಮಿ
ಉತ್ತರ 40:
(ಬಿ) ತಮ್ಮ
ಉತ್ತರ 41:
ಜೋಡಿನುಡಿ
ಉತ್ತರ 42:
ಹಸಾದ
ಉತ್ತರ 43:
ಸುಗಂಧ (ಸುಂದರ)
ಉತ್ತರ 44:
ಅರಬ್ಬಿ
ಉತ್ತರ 45:
ಅಥವಾ
ಖಳನೊಳವಿಂಗೆ ಕುಪ್ಪವರಮೆಂಬವೊಲಾಂಗರಮುಂಟೆ ನಿನ್ನದೊಂ
46.
ಈ ವಾಕ್ಯವನ್ನು ಕುಮಾರವ್ಯಾಸನು ಬರೆದಿರುವ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯಭಾಗದಿಂದ ಆರಿಸಲಾಗಿದೆ.
ಅಲಂಕಾರ ಹೆಸರು : ರೂಪಕಾಲಂಕಾರ
ಲಕ್ಷಣ : ಅತಿ ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇದವನ್ನು ಹೇಳಿ ವರ್ಣಿಸಿದಾಗ ಅದು ರೂಪಕ ಅಲಂಕಾರವೆನಿಸುತ್ತದೆ.
ಸಮನ್ವಯ : ಉಪಮೇಯ : ನಾಳಿ ಭಾರತ (ಭಾರತ ಯುದ್ದ)
ಉಪಮಾನ : ಮಾರಿಗೌತಣ
ಉಪಮೇಯವಾದ ‘ನಾಳಿನ ಭಾರತವನ್ನು’ ಉಪಮಾನವಾದ ಮಾರಿಗೌತಣಕ್ಕೆ ಅಭೇದವಾಗಿ ಕೂಪಿಸಿರುವುದರಿಂದ ಇದು ರೂಪಕಾಲಂಕಾರವಾಗಿದೆ.
ಅಥವಾ
ಉತ್ಪಕ್ಷಾಲಂಕಾರ: ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ ಉತ್ತೇಕ್ಷಾಲಂಕಾರ.
ಉದಾ: ಅಯ್ಯೋದ ಸರೋವರವು ತ್ರೈಲೋಕ್ಯಲಕ್ಷ್ಮಿಯು ತನ್ನ ಸೌಂದಯ್ಯವನ್ನು ನೋಡಲು ಮಾಡಿಟ್ಟ ರನ್ನಗನ್ನಡಿಯೋ ಎಂಬಂತೆ ಶೋಭಿಸಿತು.
ಉಪಮೇಯ: ಅಚೋದ ಸರೋವರ
ಉಪಮಾನ: ರನ್ನಗನ್ನಡಿ
ಅಲಂಕಾರ: ಉತ್ತೇಕ್ಷಾಲಂಕಾರ
ಲಕ್ಷಣ: ಉಪಮೇಯವಾದ ವಸ್ತುವನ್ನು ಅಥವಾ ಸನ್ನಿವೇಶವನ್ನು ಉಪಮಾನವಾದ ವಸ್ತುವನ್ನಾಗಿ ಅಥವಾ ಸನ್ನಿವೇಶವನ್ನಾಗಿ ಕಲ್ಪಿಸುವುದೇ ಉತ್ಪಕ್ಷಾಲಂಕಾರ.
ಸಮನ್ವಯ: ಉಪಮೇಯ : ಅಚೋದ ಸರೋವರ
ಉಪಮಾನ : ರನ್ನಗನ್ನಡಿ.
ಉತ್ತರ 47:
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
ಗಾದೆಯ ಮಾತು ಚಿಕ್ಕ ಚಿಕ್ಕ ವಾಕ್ಯಗಳಲ್ಲಿದ್ದರೂ ವಿಶಾಲವಾದ ಅರ್ಥವನ್ನು ಕೊಡುತ್ತದೆ. ಗಾದೆಗಳನ್ನು ಬಳಸದ ಭಾಷೆಯಿಲ್ಲ ದೇಶ ಇಲ್ಲ. “ಹಸಿಯ ಗೋಡೆಯ ಮೇಲೆ ಹರಳನಿಟ್ಟಂತೆ” ಇದೆ ಇದರ ಪ್ರಭಾವ, ಗಾದೆ ವಾಕ್ಯಗಳು ಬಹು ಪ್ರಚಲಿತವಾಗಿರಲು ಕಾರಣವೇ ಅದರ ನೇರ ಬಿಚ್ಚು ನುಡಿ. ಇಂತಹ ಗಾದೆಗಳಲ್ಲಿ ಒಂದು ಮೇಲಿನ ಈ ಗಾದೆ ಮಾತು. “ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ”
ವರ್ಷಗಟ್ಟಲೆ ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕೆಲವು ಗಂಟೆಗಳಲ್ಲಿ ಉರುಳಿಸಬಹುದು. ಕಷ್ಟಪಟ್ಟು ದುಡಿದ ಹಣವನ್ನು ಕ್ಷಣ ಮಾತ್ರದಲ್ಲಿ ಸೋಲು ಮಾಡಬಹುದು. ಸತ್ಯಮಾರ್ಗದಲ್ಲಿ ನಡೆದು ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದು ಕ್ಷಣಮಾತ್ರದಲ್ಲಿ ದುಷ್ಟರ ಸಹವಾಸದಿಂದ ಹಾಳಾಗಬಹುದು. ಉತ್ತಮ ಕೆಲಸಗಳಿಗೆ ಬೇಕಾಗುವ ಶ್ರಮ ಸಮಯ ದೀರ್ಘವಾಗಿದ್ದು ಅದನ್ನು ಹಾಳುಗೆಡಹಲು ಕೆಲವೇ ಕ್ಷಣ ಸಾಕು, ಕುಂಬಾರ ಹಗಲೂ ರಾತ್ರಿ ಕಷ್ಟಪಟ್ಟು ಮಾಡಿದ ಮಡಿಕೆ ಒಂದು ದೊಣ್ಣೆ ಪೆಟ್ಟಿನಿಂದ ಒಡೆದು ಹೋಗುವುದು. ಆದ್ದರಿಂದಲೇ “ಕಟ್ಟುವುದು ಕಠಿಣ; ಕೆಡವುಹುದು ಸುಲಭ” ಎಂಬ ಮಾತೂ ಮೇಲಿನ ಗಾದೆಯ ಅರ್ಥವನ್ನೇ ಹೇಳುತ್ತದೆ.
ದೇಶ ನೋಡು; ಕೋಶ ಓದು
ಹಿರಿಯರ ಅನುಭವದ ನುಡಿಯೇ ಗಾದೆ. ಕಿರಿದಾದ ಮಾತಿನಲ್ಲಿ ಹಿರಿದಾದ ಅರ್ಥವನ್ನು ಹೇಳುವ ಗಾದೆಗಳಿಲ್ಲದ ದೇಶವಿಲ್ಲ; ಭಾಷೆಯಿಲ್ಲ; ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತೇ ಗಾದೆಯ ಮಹತ್ವವನ್ನು ಹೇಳುತ್ತದೆ. ಹಸಿಯ ಗೋಡೆಯ ಮೇಲೆ ಹರಳು ನೆಟ್ಟಂತೆ ಇದರ ಪರಿಣಾಮ, ಗಾದೆಗಳನ್ನು ಬುದ್ದಿ ಹೇಳುವಾಗ ವಿಚಾರಗಳನ್ನು ಸ್ಪಷ್ಟಪಡಿಸುವಾಗ, ಹೋಲಿಸುವಾಗ, ತಪ್ಪುಗಳನ್ನು ತಿದ್ದುವಾಗ ಬಳಸುತ್ತಾರೆ. ಮೇಲಿನ ಗಾದೆ ಜ್ಞಾನ ಸಂಪಾದನೆಗೆ, ಬುದ್ದಿ ಹೆಚ್ಚಿಸಿಕೊಳ್ಳಲು, ಯಾವ ಮಾರ್ಗ ಅನುಸರಿಸಬೇಕು ಎಂದು ತಿಳಿಸುತ್ತದೆ. ಬೇರೆ ಬೇರೆ ಸ್ಥಳಗಳಿಗೆ ಭೇಟಿಕೊಟ್ಟರೆ ನಮ್ಮ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದರೆ ಜ್ಞಾನ ಸಂಪಾದನೆಯಾಗುತ್ತದೆ. ಹೀಗೆ ಸಂಪಾದಿಸುವ ಜ್ಞಾನದಿಂದ ನಮ್ಮ ವ್ಯಕ್ತಿತ್ವ ಎತ್ತರಕ್ಕೆ ಬೆಳೆಯುತ್ತದೆ. ಪರಿಪೂರ್ಣ ವ್ಯಕ್ತಿಗಳಾಗಿ ಬದುಕು ಸಾರ್ಥಕವಾಗುತ್ತದೆ ಎನ್ನುವುದು ಈ ಗಾದೆಯ ವಿಶೇಷ ಅರ್ಥ.
ಆಳಾಗಬಲ್ಲವನು ಅರಸಾಗಬಲ್ಲನು
ಗಾದೆಗಳು ಹಿರಿಯರ ಅನುಭವಾಮೃತಗಳು, ಗಾದೆಗಳು ವೇದಗಳಿಗೆ ಸಮ ಎಂಬ ಮಾತೂ ಇದೆ. ಆಳಾಗಬಲ್ಲವನು ಅರಸನಾಗಬಲ್ಲ ಎಂಬುದು ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದೆನಿಸಿದೆ. ಈ ಗಾದೆಯು ಕಾಯಕದ ಮಹತ್ವವನ್ನು ವಿವರಿಸುತ್ತದೆ, ತಮಗೆ ವಹಿಸಿರುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ಕಸಗುಡಿಸುವ ಕಾರ್ಯವೂ ಕೀಳಲ್ಲ, ತಮ್ಮ ಗೌರವವನ್ನು ಹೊಂದಬೇಕು. ನಾನು ಶ್ರೀಮಂತ, ಓದಿದವನು ಎಂಬ ಅಹಂಕಾರವನ್ನು ಪ್ರದರ್ಶಿಸಿ ತನಗೆ ಒಪ್ಪಿಸಿದ ಕಾರ್ಯ ಕೀಳು ಎಂದು ಭಾವಿಸಿದರೆ ಅವರು ಎಂದೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕಾಯಕವೇ ಕೈಲಾಸ, ದುಡಿಮೆಯೇ ದುಡ್ಡಿನತಾಯಿ, ಅರಸನಾಗ ಬಯಸುವವನು ಸೇವಕನ ಕೆಲಸವನ್ನು ಬಲ್ಲವನಾಗಿದ್ದು ಅವನು ಅದನ್ನೂ ಮಾಡುವಲ್ಲಿ ಸಮರ್ಥನಿರಬೇಕು ಎಂಬುದು ಈ ಗಾದೆಯ ಅರ್ಥವಾಗಿದೆ.
ಉತ್ತರ 48:
ದಿನಾಂಕ : 06-06-2018
ಬಿಜಾಪುರ
ಇಂದ,
ಯಶೋಧಾ
ಬಾಲಕಿಯರ ಸರ್ಕಾರಿ ಪ್ರೌಢಶಾಲೆ
ಇಳಕಲ್
ಗೆ,
ಸಂಪಾದಕರು ಕನ್ನಡಪ್ರಭ ದಿನಪತ್ರಿಕೆ,
ಡಾ. ಬಿ.ಆರ್. ಅಂಬೇಡ್ಕರ್ ಬೀದಿ,
ಬೆಗಳೂರು – 560 001.
ಮಾನ್ಯರೆ,
ವಿಷಯ : ‘ಕರಾಟೆ ಕೌಶಲ ತರಬೇತಿ’ ಸಮಾರೋಪ ಸಮಾರಂಭದ ವರದಿ
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 5-6-2018 ರಂದು ನಮ್ಮ ಬಲಕಿಯರ ಸರ್ಕಾರಿ ಪ್ರೌಢಶಾಲೆ, ಇಳಕಲ್ ಇಲ್ಲಿ ಈ ವರ್ಷದ ವಿದ್ಯಾರ್ಥಿನಿಯರ ಕರಾಟೆ ಕೌಶಲ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ವಹಿಸಿದ್ದರು. ಅತಿಥಿಗಳಾಗಿ ಪ್ರಖ್ಯಾತ ಕರಾಟೆ ಪಟುವಾದ ಶ್ರೀ ಸಚ್ಚಿದಾನಂದ ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಆತ್ಮರಕ್ಷಣೆಯ ವಿದ್ಯೆಯಾಗಿ ಕರಾಟೆ ಎಂಬ ವಿಷಯದ ಬಗ್ಗೆ ಬಹಳ ಚೆನ್ನಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಲ್ಲರಿಗೂ ‘ಪ್ರಶಸ್ತಿ ಪತ್ರವನ್ನು ವಿತರಿಸಲಾಗಿತ್ತು. ಕರಾಟೆ ಕಲೆಯ ಪ್ರದರ್ಶನ ಏರ್ಪಡಿಸಲಾಗಿತ್ತು. ಅದಕ್ಕೆ ಸಂಬಂಧಿಸಿದ ವರದಿ ಮತ್ತು ಛಾಯಾಚಿತ್ರಗಳನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ. ದಯವಿಟ್ಟು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು
ಕೋರುತ್ತೇನೆ.
ವಂದನೆಗಳೊಂದಿಗೆ,
ಇಂತಿ ತಮ್ಮ ವಿಶ್ವಾಸಿ,
(ಯಶೋಧಾ)
ಅಥವಾ
ದಿನಾಂಕ : 02-01-2018
ನಂ. 16, 3ನೇ ಕ್ರಾಸ್,
ಐಶ್ವರ್ಯನಗರ, ವಿಜಯಪುರ
ತೀರ್ಥರೂಪ ಸಮಾನರಾದ ಅಣ್ಣ ಬಸವೇಶನಿಗೆ ನಿನ್ನ ತಂಗಿ ಮಾಡುವ ನಮಸ್ಕಾರಗಳು. ಇಲ್ಲಿ ನಾನು ಆರೋಗ್ಯವಾಗಿರುತ್ತೇನೆ. ಅಲ್ಲಿ ನಿಮ್ಮೆಲ್ಲರ ಆರೋಗ್ಯಕ್ಕೆ ಪತ್ರ ಬರೆಯಿರಿ.
ಈಗ ತಿಳಿಸುವುದೇನೆಂದರೆ ನಮ್ಮ ಶಾಲೆಯಲ್ಲಿ 2017 ಡಿಸೆಂಬರ್ ತಿಂಗಳ 28 ರಂದು ಶಾಲಾ ವಾರ್ಷಿಕೋತ್ಸವವನ್ನು ಆಚರಿಸಿದೆವು. ಈ * ಕಾರ್ಯಕ್ರಮಕ್ಕೆ ಪ್ರಖ್ಯಾತ ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಮ್ಮ ಶಾಲಾ
ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆ ದಿನ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ನನಗೂ ಆಟ ಹಾಗೂ ನೃತ್ಯದಲ್ಲಿ ಬಹುಮಾನಗಳು ಬಂದವು. ಅಂದು ಜನಪದ ಗೀತೆಗಾಯನ, ನಾಟಕ, ನೃತ್ಯ, ಕೋಲಾಟ ಮೊದಲಾದ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.
ಮುಖ್ಯ ಅತಿಥಿಗಳು ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಹರುಷ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಂದು ಸಂಜೆ 3 ಗಂಟೆಗೆ ಕಾರ್ಯಕ್ರಮ ಮುಗಿಯಿತು.
ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸು.
ನಿನ್ನ ಪ್ರೀತಿಯ ತಂಗಿ
(ರಾಜೇಶ್ವರಿ)
ಹೊರ ವಿಳಾಸ :
ಬಸವೇಶ
ನಂ. 13, ಚಿತ್ರಾ ರಸ್ತೆ,
ಪುಲಿಕೇಶಿ ನಗರ,
ಬಾದಾಮಿ, ಬಾಗಲಕೋಟೆ ಜಿಲ್ಲೆ
ಉತ್ತರ 49:
ಸ್ವಚ್ಛ ಭಾರತ ಅಭಿಯಾನದಲ್ಲಿ ವಿದ್ಯಾರ್ಥಿಗಳ ಪಾತ್ರ
ಎಲ್ಲಿ ಸ್ವಚ್ಛತೆ ಇರುವುದೋ ಅಲ್ಲಿ ದೇವರೂ ಸಹ ವಾಸಿಸುತ್ತಾನೆ ಎಂಬ ಪ್ರಸಿದ್ಧವಾದ ಮಾತೊಂದಿದೆ. ನಮ್ಮ ಆರೋಗ್ಯದ ದೃಷ್ಟಿಯಿಂದಲೂ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಬೇಕು. ಪ್ರತಿಯೊಬ್ಬರೂ ಹಾಗೇ ಯೋಚಿಸಿದರೆ, ಕಾರ್ಯ ಪ್ರವೃತ್ತವಾದರೆ ಇಡೀ ಭಾರತ ಸ್ವಚ್ಛವಾಗಿರುತ್ತದೆ. ಈ ಕಾರ್ಯ ನಮ್ಮ ನಮ್ಮ ಮನೆಗಳಿಂದಲೇ ಪ್ರಾರಂಭಿಸಬೇಕು.
ಭಾರತದ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿಯವರು ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದು `ಸ್ವಚ್ಛಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ನಗರ ಹಳ್ಳಿಗಳೆನ್ನದೆ, ಎಲ್ಲಡೆಯೂ ಇದಕ್ಕೆ ಉತ್ತಮ ಪ್ರತಿಕ್ರಿಯೆಯು ಪ್ರಕಟವಾಗಿದೆ. ತ್ಯಾಜ್ಯವಸ್ತುಗಳ ಸಮರ್ಪಕ ವಿಲೇವಾರಿಯಾದರೆ ಸ್ವಚ್ಛ ಪರಿಸರ ಕಾಣಬಹುದಾಗಿದೆ. ಪ್ರತಿನಿತ್ಯ ಸ್ವಲ್ಪ ಸಮಯವನ್ನು ಸ್ವಚ್ಛತೆಗೆ ಮೀಸಲಿಡುವುದರಿಂದ ಸುಂದರವಾದ ಪರಿಸರವನ್ನು ನಾವು ಕಾಣಬಹುದಾಗಿದೆ. ಹಿರಿಯರು, ಕಿರಿಯರೆನ್ನದೆ ಪ್ರತಿಯೊಬ್ಬರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಸ್ವಚ್ಛಭಾರತ ಅಭಿಯಾನ ಯಶಸ್ವಿಯಾಗುತ್ತದೆ.
ರಾಷ್ಟ್ರೀಯ ಭಾವೈಕ್ಯತೆಯಲ್ಲಿ ರಾಷ್ಟ್ರೀಯ ಹಬ್ಬಗಳ ಮಹತ್ವ.
ದೇಶದಾದ್ಯಂತ ಆಚರಿಸುವ ಹಬ್ಬಗಳನ್ನು ರಾಷ್ಟ್ರೀಯ ಹಬ್ಬಗಳೆಂದು ಕರೆಯುವರು. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನಾಚರಣೆ, ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ, ಅಕ್ಟೋಬರ್ 2ರ ಗಾಂಧಿ ಜಯಂತಿ ಮತ್ತು ಜನವರಿ 26 ರಂದು ಆಚರಿಸಲ್ಪಡುವ ಗಣರಾಜ್ಯೋತ್ಸವ ಇವುಗಳಲ್ಲಿ ಪ್ರಮುಖವಾಗಿವೆ. ಬ್ರಿಟಿಷ್‌ರ ಆಳ್ವಿಕೆಯಿಂದ ಭಾರತ 1947ರ ಆಗಸ್ಟ್ 15ರಂದು ಮುಕ್ತವಾಯಿತು. ಇದರ ಸ್ಮರಣಾರ್ಥವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು. ಅಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದವರ ಸ್ಮರಣೆ ಮಾಡಲಾಗುವುದು. ಸ್ವಾತಂತ್ರ್ಯಾನಂತರ ನಮ್ಮದೇ ಸಂವಿಧಾನವನ್ನು ರಚಿಸಿಕೊಂಡೆವು. 1950ರಲ್ಲಿ ಇದು ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಪ್ರತಿವರ್ಷ ಜನವರಿ 26ನ್ನು ಗಣರಾಜ್ಯೋತ್ಸವವೆಂದು ಆಚರಿಸಲಾಗುತ್ತದೆ. ಅಲ್ಲದೆ ಯುಗಾದಿ, ದೀಪಾವಳಿ, ಹೋಳಿ, ಓಣಂ, ರಂಜಾನ್, ಕ್ರಿಸ್‌ಮಸ್ ಮೊದಲಾದ ಸಾಂಸ್ಕೃತಿಕ ಹಬ್ಬಗಳು ಉಂಟು. ಆಯಾ ಜನಾಂಗದ ಜನರು ತಮ್ಮ ತಮ್ಮ ಹಬ್ಬಗಳನ್ನು ಆಚರಿಸುವರು. ಎಲ್ಲರೊಂದಿಗೆ ಸಂತೋಷ ಹಂಚಿಕೊಳ್ಳುವರು.
ಮಹಿಳಾ ಸಬಲೀಕರಣ,
ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ಸಂತೋಷಪಡುತ್ತಾರೆ ಎಂಬ ಮಾತೊಂದಿದೆ. ಮಹಿಳೆಯರು ಪುರುಷರಷ್ಟೇ ಸಮರ್ಥರು, ಸಮಾನರು, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮಾನರಾಗಿ ಸಾಧನೆಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಕೆಲವು ಕಾರಣಗಳಿಂದ ಸ್ತ್ರೀಯರು ಅವಕಾಶ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಅವರಿಗೆ ಅವಕಾಶಗಳನ್ನು ನೀಡಿ ಮಹಿಳಾ ಸಬಲೀಕರಣ ಮಾಡಬೇಕಾಗಿದೆ.
ಮಹಿಳೆಯರನ್ನು ಸಬಲರನ್ನಾಗಿಸಲು ಸರ್ಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ವಿಶೇಷವಾಗಿ ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ತಂದು ಅವರನ್ನು ಸಬಲರನ್ನಾಗಿಸುವಲ್ಲಿ ಸ್ತ್ರೀಶಕ್ತಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿ ಸ್ವಸಹಾಯ ಗುಂಪುಗಳನ್ನು ನಿಯೋಜಿಸಲಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆರ್ಥಿಕ ಸಹಾಯ ಮತ್ತು ಕಾನೂನು ನೆರವುಗಳನ್ನು ನೀಡಲು ಸಾಂತ್ವನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸ್ವಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗುತ್ತದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಮಹಿಳೆಯರಿಗೆ ಗೌರವನೀಡಿ ಅವರೂ ಸಹ ಸ್ವಾಭಿಮಾನದಿಂದ, ಸ್ವಾವಲಂಬನೆಯಿಂದ ಬದುಕಲು ನೆರವಾಗಬೇಕು. ಈ ಮೂಲಕ ಮಹಿಳಾ ಸಬಲೀಕರಣವನ್ನು ಮಾಡಬೇಕಾದ ಜವಾಬ್ದಾರಿ ಸರ್ಕಾರದೊಡನೆ ಸಾರ್ವಜನಿಕರದ್ದೂ ಆಗಿದೆ.